ದೇವರ ಸ್ವಂತ ನಾಡು ಎಂದು ಜಾಗತಿಕವಾಗಿ ಹೆಸರುವಾಸಿಯಾಗಿರುವ ಕೇರಳವು ಅದರ ಸಾರಸಂಗ್ರಹಿ ಮತ್ತು ವೈವಿಧ್ಯಮಯ ಪಾಕಪದ್ಧತಿ ಅನುಭವಗಳಿಗೆ ಹೆಸರುವಾಸಿಯಾಗಿದೆ. ಕೇರಳ ಪ್ರವಾಸೋದ್ಯಮವು ನಡೆಸುತ್ತಿರುವ ಅಂತರರಾಷ್ಟ್ರೀಯ ಆನ್‌ಲೈನ್ ಅಡುಗೆ ಸ್ಪರ್ಧೆಯಾದ, ಕೇರಳ ಪಾಕಪದ್ಧತಿ ಸ್ಪರ್ಧೆ 2020 (ಕೆಸಿಸಿ 2020-21), ಕೇರಳದ ರುಚಿಕರವಾದ ಭಕ್ಷ್ಯಗಳನ್ನು ಸವಿಯಲು ಜಗತ್ತಿನಾದ್ಯಂತದ ಪ್ರಯಾಣಿಕರನ್ನು ಆಹ್ವಾನಿಸುವ ಗುರಿಯನ್ನು ಹೊಂದಿದೆ. ಕೇರಳದ ಕೆಲವು ವಿಶೇಷವಾದ ಮತ್ತು ಸಾಂಪ್ರದಾಯಿಕ ಭಕ್ಷ್ಯಗಳು ಚಿತ್ರಶಾಲೆಯಲ್ಲಿ/ಗ್ಯಾಲರಿಯಲ್ಲಿ ಪ್ರಕಟಿತಗೊಂಡಿವೆ. ನೀವು ಮಾಡಬೇಕಾಗಿರುವುದು ಇಷ್ಟೇ, ಈ ಯಾವುದೇ ಭಕ್ಷ್ಯಗಳನ್ನು ಮನೆಯಲ್ಲಿಯೇ ತಯಾರಿಸಿ, ಅದನ್ನು ಚಿತ್ರೀಕರಿಸಿ ನಮ್ಮೊಂದಿಗೆ ಹಂಚಿಕೊಳ್ಳುವುದು. ಅತ್ಯಾಕರ್ಷಕ ಬಹುಮಾನಗಳು ನಿಮಗಾಗಿ ಕಾಯುತ್ತಿವೆ!
ನೀವು ಜಗತ್ತಿನಲ್ಲಿ ಎಲ್ಲೇ ಇದ್ದರೂ ಸ್ಪರ್ಧೆಯು ಎಲ್ಲಾ ಕೇರಳೇತರರಿಗೆ ಮುಕ್ತವಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ವಯಸ್ಸಿನ ಮಿತಿಯಿಲ್ಲ
ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ನೇಮಿಸಲ್ಪಟ್ಟ ತೀರ್ಪುಗಾರರ ಸಮಿತಿ – ಪಾಕಶಾಸ್ತ್ರದ ನಿಪುಣರು - ನಮೂದುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ವಿಜೇತರನ್ನು ಆಯ್ಕೆ ಮಾಡುತ್ತಾರೆ. ನಮೂದುಗಳ ಮೌಲ್ಯಮಾಪನವನ್ನು ಭಾಗವಹಿಸುವವರು ತಮ್ಮ ವೀಡಿಯೊ ಪ್ರಸ್ತುತಿಯಲ್ಲಿ ಕೇರಳದ ಸಾಂಪ್ರದಾಯಿಕ ಪಾಕಶಾಲೆಯ ಶೈಲಿಗಳ ಅಂಶಗಳನ್ನು ಉತ್ತಮವಾಗಿ ಹೇಗೆ ತಂದಿದ್ದಾರೆ ಎಂಬ ಆಧಾರದ ಮೇಲೆ ಮಾಡಲಾಗುತ್ತದೆ. ನಮೂದುಗಳನ್ನು ಮೌಲ್ಯಮಾಪನ ಮಾಡುವಾಗ ಪ್ರತಿ ಪ್ರವೇಶದ ಸಾಮಾಜಿಕ ಮಾಧ್ಯಮ ಚಾನೆಲ್‌ಗಳಲ್ಲಿನ ಜನಪ್ರಿಯತೆ / ಪ್ರೇಕ್ಷಕರ ಪ್ರತಿಕ್ರಿಯೆ, ಹಾಗೆಯೇ ಸ್ಪರ್ಧೆಯ ಮಾಹಿತಿ ವಿನಿಮಯವನ್ನೂ ಪರಿಗಣಿಸಲಾಗುತ್ತದೆ.
ಖಂಡಿತ, ಇದು ರುಚಿ ಅಥವಾ ಸುವಾಸನೆಯ ಬಗ್ಗೆ ಅಲ್ಲ ಆದರೆ ನಿಮ್ಮ ಅಡುಗೆಮನೆಯಲ್ಲಿ ಕೇರಳ ಪದ್ಧತಿಯ ತಿನಿಸುಗಳನ್ನು ಆಚರಿಸುವ ವಿಧಾನದ ಬಗ್ಗೆ. ವಿಷಯ - ‘ನಿಮ್ಮ ಅಡುಗೆಮನೆಯಲ್ಲಿ ಕೇರಳ ಶೈಲಿಯ ಪಾಕಪದ್ಧತಿಯನ್ನು ಅಪ್ಪಿಕೊಳ್ಳಿ’ - ಸೂಚಿಸುವಂತೆ, KCC 2020-21 ಮುಖ್ಯವಾಗಿ ನಿಮ್ಮ ವೀಡಿಯೊ ಪ್ರಸ್ತುತಿಗಳಲ್ಲಿ ದೇವರ ಸ್ವಂತ ನಾಡಿನ ಸಾಂಪ್ರದಾಯಿಕ ಪಾಕಶಾಲೆಯ ಶೈಲಿಗಳ ಅಂಶಗಳನ್ನು ನೀವು ಉತ್ತಮವಾಗಿ ಹೇಗೆ ತರಬಹುದು ಎಂಬುದರ ಕುರಿತು. ನೀವು ತರಕಾರಿಗಳು ಅಥವಾ ಮಾಂಸವನ್ನು ತುಂಡು ಮಾಡುವ ವಿಧಾನ, ನೀವು ಆಯ್ಕೆಮಾಡುವ ಪಾತ್ರೆಗಳು, ನೀವು ಬಡಿಸುವ ಬಗೆ, ಕುಟುಂಬ ಸದಸ್ಯರ ಉತ್ಸಾಹ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನೀವು ಖಾದ್ಯವನ್ನು ಆನಂದಿಸಿದ ನಂತರ ಮನೆಯಲ್ಲಿ ಮೂಡುವ ಒಗ್ಗಟ್ಟಿನ ಮತ್ತು ಸೌಹಾರ್ದತೆಯ ಪ್ರಜ್ಞೆಯ ಕುರಿತಾಗಿದೆ.
ಈಗ, ನಿಮ್ಮ ನೆಚ್ಚಿನ ಭಕ್ಷ್ಯಗಳನ್ನು ಆಯ್ಕೆ ಮಾಡಿ, ಕ್ಯಾಮೆರಾವನ್ನು ಆವರಿಸಿ, ಅಡುಗೆ ಪ್ರಾರಂಭಿಸಿ!
ಈಗಲೆ ನೋಂದಣಿ ಮಾಡಿ!
Department of Tourism, Government of Kerala, Park View, Thiruvananthapuram, Kerala, India - 695 033
Phone: +91 471 2321132, Fax: +91 471 2322279, E-mail: info@keralatourism.org.
All rights reserved © Kerala Tourism 2020. Copyright | Terms of Use | Cookie Policy | Contact Us.
Developed & Maintained by Invis.