ಕೆಲವೊಮ್ಮೆ ನಾವು ಜೀವನ ಸಾಗಿಸುವುದರಲ್ಲಿ ನಿರತರಾಗುತ್ತೇವೆ, ಅದರಿಂದ ನಾವು ಬದುಕು ಕಟ್ಟಿಕೊಳ್ಳುವುದನ್ನು ಮರೆತುಬಿಡುತ್ತೇವೆ. ಮನೆಯಿಂದ ಕಚೇರಿಗೆ ಮತ್ತು ಕಚೇರಿಯಿಂದ ಮನೆಗೆ ಹೋಗುವ ನಮ್ಮ ದಿನಚರಿಯು ಬಹುಶಃ ನಮ್ಮೆಲ್ಲರನ್ನು ಏಕತಾನತೆಯನ್ನಾಗಿ ಮಾಡಿದೆ. ಬಿಡುವಿಲ್ಲದ ಕೆಲಸಕಾರ್ಯಗಳಿಂದಾಗಿ ಕುಟುಂಬದ ಅಮೂಲ್ಯ ಕ್ಷಣಗಳು ತಪ್ಪಿಹೋಗಿರಬಹುದು. ನಾವು ನಮ್ಮ ಹಳೆಯ ಸ್ನೇಹಿತರನ್ನು ಕೊನೆಯ ಬಾರಿಗೆ ಭೇಟಿಯಾದದ್ದು ಯಾವಾಗ ಎಂದು ನೆನಪಿಸಿಕೊಳ್ಳಿ? ಇವೆಲ್ಲವನ್ನೂ ಮತ್ತೆ ಪಡೆದುಕೊಳ್ಳುವ ಸಮಯ ಬಂದಿದೆ. ತಾಜಾ ನೆನಪುಗಳನ್ನು ಸವಿಯಲು ಸಿದ್ಧರಾಗಿ ಮತ್ತು ಉಲ್ಲಾಸಕರ ಪ್ರವಾಸವನ್ನು ಆಯ್ಕೆ ಮಾಡಿ, ಕೇರಳ ಪ್ರವಾಸ ಕೈಗೊಳ್ಳಿ. ಕೇರಳವು ಆಯ್ಕೆಗಳೊಂದಿಗೆ ನಿಮ್ಮನ್ನು ಮನಸೂರೆಗೊಳಿಸುತ್ತದೆ. ಗಾಡ ಹಸುರು ಬಣ್ಣದ ಹಿನ್ನೀರು, ಸೊಂಪಾದ ಗಿರಿಧಾಮಗಳು, ವಿನೂತನ ವನ್ಯಜೀವಿಗಳು, ಧುಮ್ಮಿಕ್ಕುವ ಜಲಪಾತಗಳು, ವಿಸ್ತಾರವಾದ ತೋಟಗಳು, ಸೊಂಪಾದ ಭತ್ತದ ಗದ್ದೆಗಳು, ಚಿತ್ತಾಕರ್ಷಕವಾದ ಉತ್ಸವಗಳು ಮತ್ತು ಮರುಳುಗೊಳಿಸುವ ಕಲಾ ಪ್ರಕಾರಗಳಿಂದ ಕೇರಳವು ನಿಮ್ಮನ್ನು ಮನಸೆಳೆಯುತ್ತದೆ. ಕೇರಳವು ನಿಮಗೆ ಎಲ್ಲವನ್ನೂ ನೀಡುತ್ತದೆ. ಇದು ನಿಮ್ಮ ಜೀವನದ ಏಕತಾನತೆಯನ್ನು ದೂರ ಮಾಡುವುದು ಮಾತ್ರವಲ್ಲದೆ ನಿಮ್ಮನ್ನು ಫಿಲ್ಟರ್ ಮಾಡಿದ ವಾಲ್ಪೇಪರ್ಗಳಿಂದ ದೂರ ಮಾಡಿ, ನಿಮಗೆ ಸುಂದರವಾದ ಭೂದೃಶ್ಯಗಳನ್ನು ತೋರಿಸುತ್ತದೆ. ಪ್ರವಾಸಕ್ಕಾಗಿ ಸಿದ್ಧರಾಗಿ, ಹೊರಬನ್ನಿ ಮತ್ತು ವಿಶ್ವದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾದ ಕೇರಳದಲ್ಲಿ ನೆನಪುಗಳನ್ನು ಸೃಷ್ಟಿಸಿ.
ಹಳೆಯ ನೆನಪುಗಳು ನೀವು ಕಳೆದುಕೊಳ್ಳುತ್ತಿರುವ ಎಲ್ಲವನ್ನೂ ನಿಮಗೆ ನೆನಪಿಸುತ್ತಿದ್ದರೆ, ಇದು ದೇವರ ಸ್ವಂತ ನಾಡಿನಲ್ಲಿ ಹೊಸದನ್ನು ಸೃಷ್ಟಿಸುವ ಸಮಯ. ಕೇರಳ ಪ್ರವಾಸಕ್ಕಾಗಿ ತಯಾರಾಗಿ ಮತ್ತು ನಮ್ಮ ಕಡಲತೀರಗಳು, ಬೆಟ್ಟಗಳು, ಹಿನ್ನೀರು ಮತ್ತು ಕಾಡುಗಳಲ್ಲಿ ಕಳೆದುಹೋದ ಸಮಯವನ್ನು ಮತ್ತೆ ಪಡೆದುಕೊಳ್ಳಿ.
ಜೀವನದ ಉತ್ಸಾಹವಿಲ್ಲದ ದಿನಚರಿಯಲ್ಲಿ ನೆಲೆಗೊಂಡಾಗ ಮತ್ತು ಹಳೆಯ ಉತ್ಸಾಹವು ದೂರದ ಕನಸಾಗಿ ತೋರುತ್ತಿರುವಾಗ, ಸಿದ್ಧರಾಗಿ ಮತ್ತು ಕೇರಳ ಪ್ರವಾಸ ಕೈಗೊಳ್ಳಿ. ದೇವರ ಸ್ವಂತ ನಾಡಿನ ಬೆಟ್ಟಗಳು, ಹಿನ್ನೀರು, ಕಡಲತೀರಗಳು ಮತ್ತು ಕಾಡುಗಳಲ್ಲಿ ಕಳೆದುಹೋದ ಸಮಯವನ್ನು ಮತ್ತೆ ಪಡೆದುಕೊಳ್ಳಿ.
ನೀವು ತಿಳಿಯದೆಯೇ ಜೀವನದ ಅಮೂಲ್ಯ ಕ್ಷಣಗಳನ್ನು ಕಳೆದುಕೊಂಡಿದ್ದೀರಿ ಎಂದು ನೀವು ಅರಿತುಕೊಂಡಾಗ, ಕೇರಳ ಪ್ರವಾಸಕ್ಕಾಗಿ ಸಿದ್ಧರಾಗಿ. ಅಂತಿಮವಾಗಿ, ಕಳೆದುಹೋದ ಸಮಯವನ್ನು ಮತ್ತೆ ಪಡೆದುಕೊಳ್ಳಲು ದೇವರ ಸ್ವಂತ ನಾಡಿನ ಕಡಲತೀರಗಳು, ಬೆಟ್ಟಗಳು, ಹಿನ್ನೀರು ಮತ್ತು ಕಾಡುಗಳಿಗಿಂತ ಉತ್ತಮವಾದ ಸ್ಥಳವಿಲ್ಲ