ಕುಮಾರಕಮ್ ಗ್ರಾಮವು ವೆಂಬನಾಡ್ ಸರೋವರದ ಮೇಲಿರುವ ಚಿಕ್ಕ ದ್ವೀಪ ಪ್ರದೇಶವಾಗಿದೆ, ಮತ್ತು ಇದು ಕುಟ್ಟನಾಡ್ ಪ್ರದೇಶದ ಒಂದು ಭಾಗವಾಗಿದೆ. ಇಲ್ಲಿ ಪಕ್ಷಿಗಳ ಆಶ್ರಯ ತಾಣವಾಗಿದ್ದು, ಸುಮಾರು 14 ಎಕರೆಯಷ್ಟು ಪ್ರದೇಶದಷ್ಟು ಹರಡಿಕೊಂಡಿದೆ, ಇದು ವಲಸೆ ಹಕ್ಕಿಗಳಿಗೆ ನೆಚ್ಚಿನ ತಾಣವಾಗಿದೆ ಮತ್ತು ಪಕ್ಷಿತಜ್ಞರಿಗೆ ಇದು ಸ್ವರ್ಗ ಎನಿಸಿಕೊಂಡಿದೆ. ಎಗ್ರೆಟ್ಸ್, ಡಾರ್ಟರ್ಸ್, ನೀರುಕೊಕ್ಕರೆ, ಟೀಲ್ಸ್, ನೀರುಕೋಳಿ, ಕುಕೂ, ಹಂಸ ಮತ್ತು ಸೈಬೇರಿಯನ್ ಸ್ಟಾರ್ಕ್‌ನಂತಹ ವಲಸೆ ಹಕ್ಕಿಗಳು ಇಲ್ಲಿಗೆ ಭೇಟಿ ನೀಡುತ್ತವೆ ಮತ್ತು ಎಲ್ಲಾ ಪ್ರವಾಸಿಗರನ್ನು ಪುಳಕಿತಗೊಳಿಸುತ್ತದೆ.
ಇದು ಒಂದು ಆಕರ್ಷಕ ಹಿನ್ನೀರಿನ ಪ್ರದೇಶವಾಗಿದೆ, ಕುಮಾರಕಮ್ ಪ್ರವಾಸಿಗರಿಗೆ ಹಲವಾರು ಇತರೆ ಅನುಕೂಲತೆಗಳ ಆಯ್ಕೆಗಳನ್ನು ಒದಗಿಸುತ್ತದೆ. ರೆಸಾರ್ಟ್ ಆಗಿ ಬದಲಾಗಿರುವ ವಿಶಾಲವಾದ ಬಂಗಲೆಯಾಗಿರುವ ತಾಜ್ ಗಾರ್ಡನ್ ರಿಟ್ರೀಟ್‌ನಲ್ಲಿ ಬೋಟಿಂಗ್ ಮತ್ತು ಮೀನುಗಾರಿಕೆ ಸೌಲಭ್ಯಗಳು ಲಭ್ಯವಿದೆ.
ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹಿನ್ನೀರಿನ ರೆಸಾರ್ಟ್ ಆಗಿರುವ ವಾಟರ್‌ಸ್ಕೇಪ್ಸ್ ಹಿನ್ನೀರಿನ ದಡದಲ್ಲಿ ನಿರ್ಮಿಸಲಾದ ಸ್ವತಂತ್ರ ಕಾಟೇಜ್‌ಗಳನ್ನು ಹೊಂದಿದೆ, ಇದರಲ್ಲಿ ಇರುವ ತೆಂಗಿನ ತೋಟಗಳು ಹಿನ್ನೀರಿನ ಮನಮೋಹಕವಾದ ಷ್ಯವನ್ನು ಒದಗಿಸುತ್ತದೆ. ರಜಾದಿನಗಳ ಪ್ಯಾಕೇಜ್ಗಳು ಹೌಸ್‌ಬೋಟ್‌ಗಳನ್ನು ಮತ್ತು ಸಾಂಪ್ರದಾಯಿಕ ಕೆಟ್ಟುವಲ್ಲಮ್(ಅಕ್ಕಿಯ ನಾವೆಗಳು)ಗಳು ಅತ್ಯದ್ಭುತವಾದ ಅನುಭವಗಳನ್ನು ಒಳಗೊಂಡಿರುತ್ತದೆ.
ಕುಮಾರಕಮ್ ಬಗ್ಗೆ ಹೆಚ್ಚಿನದನ್ನು ಓದಿರಿ
ಹತ್ತಿರದ ರೈಲ್ವೇ ನಿಲ್ದಾಣ: ಕೊಟ್ಟಾಯಮ್, ಸುಮಾರು 13 ಕಿ.ಮೀ. ದೂರದಲ್ಲಿದೆ ಹತ್ತಿರದ ಏರ್‌ಪೋರ್ಟ್: ಕೊಚ್ಚಿನ್ ಅಂತರಾಷ್ಟ್ರೀಯ ಏರ್‌ಪೋರ್ಟ್, ಸುಮಾರು 94 ಕಿ.ಮೀ. ದೂರದಲ್ಲಿದೆ
ಸ್ಥಳಅಕ್ಷಾಂಶ: 9.617119, ರೇಖಾಂಶ: 76.429482
ಭೌಗೋಳಿಕ ಮಾಹಿತಿ ಮ್ಯಾಪ್ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.