ಮುನ್ನಾರ್

 

ಮುನ್ನಾರ್ ಮೂರು ಪರ್ವತ ಶ್ರೇಣಿಗಳ ಸಂಗಮ ಸ್ಥಾನವಾಗಿದೆ – ಮುಥಿರಾಪುಝಾ, ನಲ್ಲತನ್ನಿ ಮತ್ತು ಕುಂದಾಲ. ಸಮುದ್ರ ಮಟ್ಟದಿಂದ 1600 ಮೀ. ಎತ್ತರವಿರುವ ಈ ಗಿರಿ ಧಾಮವು ಹಿಂದೊಮ್ಮೆ ದಕ್ಷಿಣಭಾರತದಲ್ಲಿ ಬ್ರಿಟೀಶ್ ಸರ್ಕಾರದ ಬೇಸಿಗೆಕಾಲದ ರೆಸಾರ್ಟ್ ಆಗಿತ್ತು. ಚಿತ್ತಾಕರ್ಷಕ ಟೀ ಪ್ಲಾಂಟೇಶನ್‌ಗಳು, ನಯನ ಮನೋಹರ ಪಟ್ಟಣಗಳು, ತಂಗಾಳಿ ಬೀಸುವ ನೌಕಾಪಥಗಳು ಮತ್ತು ರಜಾದಿನದ ಸೌಕರ್ಯಗಳು ಇದನ್ನು ಜನಪ್ರಿಯ ರೆಸಾರ್ಟ್ ಅನ್ನಾಗಿ ಮಾಡಿದೆ. ಇಲ್ಲಿನ ಅರಣ್ಯಗಳಲ್ಲಿ ಮತ್ತು ಹುಲ್ಲುಗಾವಲುಗಳಲ್ಲಿ ಕಂಡುಬುರುವ ವಿನೂತನ ಸಸ್ಯವರ್ಗಗಳು ನೀಲಕುರಿಂಜಿಯಾಗಿದೆ. ಈ ಹೂವು ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಬೆಟ್ಟಗಳನ್ನು ನೀಲವರ್ಣದಲ್ಲಿ ಮುಳುಗಿಸುತ್ತವೆ, ಇದು ಮುಂದೆ 2018ರಲ್ಲಿ ಅರಳಲಿದೆ. ಮುನ್ನಾರ್ ದಕ್ಷಿಣ ಭಾರತದಲ್ಲಿಯೇ ಅತ್ಯಂತ ಎತ್ತರದ ಶೃಂಗವನ್ನು ಹೊಂದಿದೆ. ಅನಾಮುಡಿಯು 2695 ಮೀ. ಗಿಂತಲೂ ಎತ್ತರದ ಶಿಖರವಾಗಿದೆ. ಅನಾಮುಡಿಯು ಟ್ರಕ್ಕಿಂಗ್‌ಗೆ ಹೇಳಿ ಮಾಡಿಸಿರುವ ಸ್ಥಳವಾಗಿದೆ.

ಮುನ್ನಾರ್‌ನ ಗಿರಿಧಾಮಗಳನ್ನು ತಲುಪುವ ಆನಂದಕ್ಕೆ ಪ್ರವಾಸಿಗರಿಗೆ ವಿಫುಲ ಅವಕಾಶಗಳನ್ನು ಒದಗಿಸುವ ಮುನ್ನಾರ್‌ನಲ್ಲಿನ ಮತ್ತು ಅದರ ಸುತ್ತಮುತ್ತಲಿನ ಕೆಲವೊಂದು ಆಯ್ಕೆಗಳನ್ನು ನಾವೀಗ ಅವಲೋಕಿಸೋಣ.

ಎರವಿಕುಲಮ್ ರಾಷ್ಟ್ರೀಯ ಉದ್ಯಾನವನ

ಮುನ್ನಾರ್‌ನ ಸಮೀಪದಲ್ಲಿ ಇರುವ ಪ್ರಮುಖ ಆಕರ್ಷಣೆಗಳಲ್ಲಿ ಈ ಎರವಿಕುಲಮ್ ರಾಷ್ಟ್ರೀಯ ಉದ್ಯಾನವನವೂ ಒಂದಾಗಿದೆ. ಈ ಪಾರ್ಕ್ ತನ್ನ ಅಪರೂಪದ ಜೀವ ಸಂಕುಲ – ನೀಲಗಿರಿ ಕಾಡು ಮೇಕೆ ಗೆ (ನೀಲಗಿರಿ ಥಾರ್) ಅತ್ಯಂತ ಜನಪ್ರಿಯವಾಗಿದೆ. ಇದು 97 ಚದರ ಕಿಲೋಮೀಟರ್‌ಗೂ ಹೆಚ್ಚಿನ ಪ್ರದೇಶದಲ್ಲಿ ವ್ಯಾಪಿಸಿದೆ. ಈ ಉದ್ಯಾನವನವು ಅಪರೂಪದ ಚಿಟ್ಟೆಗಳು, ಪ್ರಾಣಿಗಳು ಮತ್ತು ಪಕ್ಷಿಗಳ ಸಂಕುಲಗಳ ಆಶ್ರಯ ತಾಣವೂ ಕೂಡ ಆಗಿದೆ. ಇದು ಟ್ರಕ್ಕಿಂಗ್‌ಗೆ ಅತ್ಯುತ್ತಮವಾದ ಸ್ಥಳವಾಗಿದೆ, ಈ ಉದ್ಯಾನವನವು ಇಬ್ಬನಿಯ ಹೊದಿಕೆಯಿಂದ ಕೂಡಿರುವ ಟೀ ಪ್ಲಾಂಟೇಶನ್‌ನ ಅತ್ಯದ್ಭುತವಾದ ನೋಟವನ್ನು ಒದಗಿಸುತ್ತದೆ. ಇಲ್ಲಿನ ಗಿರಿ ಶಿಖರಗಳು ನೀಲಿ ಕಾರ್ಪೆಟ್‌ನಲ್ಲಿ ಆವರಿಸಿರುವುದರಿಂದ ಉದ್ಯಾನವನದ ಮೆರಗು ಇನ್ನೂ ಹೆಚ್ಚಿದೆ, ಇದರ ಪರಿಣಾಮವಾಗಿ ನೀಲಕುರಿಂಜಿಯಲ್ಲಿ ಪುಷ್ಪಗಳನ್ನು ಕಾಣಬಹುದು. ಇಲ್ಲಿನ ಪಶ್ಚಿಮ ಘಟ್ಟಗಳ ಈ ಭಾಗದಲ್ಲಿ ಸ್ಥಳೀಯ ಸಸ್ಯವೊಂದು ಕಂಡು ಬರುತ್ತದೆ ಇದು ಹನ್ನೆರಡು ವರ್ಷಗಳಿಗೆ ಒಮ್ಮೆ ಅರಳುತ್ತದೆ.

ಅನಾಮುಡಿ ಶಿಖರ

ಅನಾಮುಡಿ ಶಿಖರವು ಎರವಿಕುಲಮ್ ರಾಷ್ಟ್ರೀಯ ಉದ್ಯಾನವನದಲ್ಲಿ ಇದೆ. ಇದು ದಕ್ಷಿಣ ಭಾರತದಲ್ಲಿಯೇ ಅತೀ ಎತ್ತರವಾದ ಶಿಖರವಾಗಿದ್ದು, 2700 ಮೀಟರ್‌ಗಳಿಗಿಂತಲೂ ಹೆಚ್ಚು ಎತ್ತರವಿದೆ. ಎರವಿಕುಲಮ್‌ನಲ್ಲಿ ಇರುವ ಅರಣ್ಯ ಮತ್ತು ವನ್ಯಜೀವಿ ಪ್ರಾಧಿಕಾರದ ಅನುಮತಿಯನ್ನು ಪಡೆದು ಕಾಲ್ನಡಿಗೆಯಲ್ಲಿ ಹೋಗಲು ಅವಕಾಶವಿದೆ.

ಮಟ್ಟುಪೆಟ್ಟಿ

ಪ್ರವಾಸಿಗರಿಗೆ ಇನ್ನೊಂದು ಅಚ್ಚರಿಯನ್ನು ನೀಡುವ ಮುನ್ನಾರ್ ಪಟ್ಟಣದಿಂದ 13 ಕಿ.ಮೀ. ದೂರದಲ್ಲಿ ಇರುವ ಸ್ಥಳವೇ ಮಟ್ಟುಪೆಟ್ಟಿಯಾಗಿದೆ. ಸಮುದ್ರ ಮಟ್ಟದಿಂದ ಸುಮಾರು 1700 ಮೀಟರ್ ಎತ್ತರದಲ್ಲಿ ಇರುವ ಮಟ್ಟುಪೆಟ್ಟಿಯು ತನ್ನ ಅಗಾಧ ಜಲರಾಸಿಯ ಸಂಗ್ರಹದ ಅಣೇಕಟ್ಟು ಮತ್ತು ಸುಂದರ ಸರೋವರಕ್ಕೆ ಪ್ರಖ್ಯಾತಿಯನ್ನು ಗಳಿಸಿದೆ, ಇದು ದೋಣಿ ನಡೆಸುವವರಿಗೆ ಅದ್ವಿತೀಯವಾದ ಅವಕಾಶ ನೀಡುತ್ತದೆ ಇದರಿಂದ ಸುತ್ತಲೂ ಇರುವ ಬೆಟ್ಟಗಳನ್ನು ಮತ್ತು ಸ್ಥಳಗಳನ್ನು ಆನಂದಿಸಬಹುದು. ಮಟ್ಟುಪೆಟ್ಟಿಯು ಇಂಡೋ-ಸ್ವಿಸ್ ಲೈವ್‌ಸ್ಟಾಕ್ ಯೋಜನೆಯ ಮೂಲಕ ಡೈರಿ ಫಾರ್ಮ್ ನಡೆಸುತ್ತಿರುವ ಖ್ಯಾತಿಗೂ ಕೂಡ ಭಾಜನವಾಗಿದ್ದು, ಇಲ್ಲಿಂದ ಅತೀ ಹೆಚ್ಚು ಹಾಲು ಉತ್ಪಾದಿಸುವ ಹಸುಗಳ ತಳಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಪಲ್ಲಿವಾಸಲ್

ಪಲ್ಲಿವಾಸಲ್ ಮುನ್ನಾರ್‌ನಲ್ಲಿರುವ ಚಿತಿರಾಪುರಮ್‌ನಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ, ಇದು ಕೇರಳದ ಮೊಟ್ಟ ಮೊದಲನೆಯ ಜಲವಿದ್ಯುತ್ ಯೋಜನೆಯ ಸ್ಥಳವಾಗಿದೆ. ಈ ಸ್ಥಳವು ಅದ್ಭುತವಾದ ಸುಂದರ ಪ್ರದೇಶವಾಗಿದೆ ಮತ್ತು ಇದನ್ನು ಪ್ರವಾಸಿಗರು ತಮ್ಮ ಮೆಚ್ಚಿನ ಪಿಕ್‌ನಿಕ್ ತಾಣವನ್ನಾಗಿಸಿಕೊಳ್ಳುತ್ತಾರೆ.

ಚಿನ್ನಕನಾಲ್ ಮತ್ತು ಅನಾಯಿರಂಗಲ್

ಮುನ್ನಾರ್ ಪಟ್ಟಣದ ಸಮೀಪ ಇರುವ ಚಿನ್ನಕನಾಲ್ ಮತ್ತು ಅದರ ಜಲಪಾತವು ಪವರ್ ಹೌಸ್ ಜಲಪಾತ ಎಂದು ಜನಪ್ರಿಯವಾಗಿದೆ, ಇದು ಸಮುದ್ರ ಮಟ್ಟದಿಂದ 2000 ಮೀ. ಎತ್ತರದಲ್ಲಿ ಇದ್ದು ಇಳಿಜಾರಾದ ಕಡಿದಾದ ಕಲ್ಲಿನ ಮೆಟ್ಟಿಲನ್ನು ಹೊಂದಿದೆ. ಈ ಸ್ಥಳವು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಸುಂದರ ನೋಟದಿಂದ ಸಮೃದ್ಧವಾಗಿದೆ. ಚಿನ್ನಕನಾಲ್‌ನಿಂದ ಸುಮಾರು 7 ಕಿ.ಮೀ ಪ್ರಯಾಣ ಮಾಡಿದರೆ ನೀವು ಅನಾಯಿರಂಗಲ್ ತಲುಪುವಿರಿ, ಅನಾಯಿರಂಗಲ್ ಮುನ್ನಾರ್‌ನಿಂದ 22 ಕಿ.ಮೀ. ದೂರದಲ್ಲಿದೆ, ಇದು ಹಚ್ಚ ಹಸಿರಿನ ಟೀ ಗಿಡಗಳ ಕಾರ್ಪೆಟ್‌ನಂತೆ ಕಂಗೊಳಿಸುತ್ತದೆ. ಈ ಸುಂದರವಾದ ಜಲಾಶಯಕ್ಕೆ ಪ್ರವಾಸ ಹೋಗುವುದು ಮರೆಯಲಾಗದ ಅನುಭವವಾಗಿದೆ. ಅನಾಯಿರಂಗಲ್ ಅಣೇಕಟ್ಟು ಟೀ ಪ್ಲಾಂಟೇಶನ್‌ಗಳಿಂದ ಮತ್ತು ಹಚ್ಚ ಹಸಿರಿನ ಅರಣ್ಯಗಳಿಂದ ಸುತ್ತುವರೆದಿದೆ.

ಟಾಪ್ ಸ್ಟೇಶನ್

ಟಾಪ್ ಸ್ಟೇಶನ್ ಇದು ಸಮುದ್ರ ಮಟ್ಟದಿಂದ 1700 ಮೀ. ಎತ್ತರದಲ್ಲಿದ್ದು, ಮುನ್ನಾರ್‌ನಿಂದ ಸುಮಾರು 32 ಕಿ.ಮೀ. ದೂರದಲ್ಲಿದೆ. ಇದು ಮುನ್ನಾರ್-ಕೊಡೈಕೆನಾಲ್ ರಸ್ತೆಯಲ್ಲಿನ ಅತ್ಯಂತ ಎತ್ತರದ ಬಿಂದುವಾಗಿದೆ. ಮುನ್ನಾರ್‌ಗೆ ತೆರಳುವ ಪ್ರವಾಸಿಗರು ಟಾಪ್ ಸ್ಟೇಶನ್ ಹೋಗುವ ಮೂಲಕ ಆನಂದಿಸುತ್ತಾರೆ, ಇದು ನೆರೆಯ ರಾಜ್ಯವಾದ ತಮಿಳು ನಾಡಿನ ನಯನ ಮನೋಹರವಾದ ನೋಟವನ್ನು ಒದಗಿಸುತ್ತದೆ. ಇದು ನೀಲಕುರಿಂಜಿ ಹೂವುಗಳು ವ್ಯಾಪಕ ಪ್ರದೇಶದಲ್ಲಿ ಅರಳುವುದನ್ನು ಆನಂದಿಸುವ ಮುನ್ನಾರ್‌ನಲ್ಲಿನ ಪ್ರಮುಖ ತಾಣಗಳ ಪೈಕಿ ಒಂದಾಗಿದೆ.

ಟೀ ಮ್ಯೂಸಿಯಂ

ಮುನ್ನಾರ್ ತನ್ನ ಟೀ ಪ್ಲಾಂಟೇಶನ್‌‌ಗಳ ಮೂಲ ಮತ್ತು ಆಧುನಿಕತೆಯ ವಿಷಯದಲ್ಲಿ ತನ್ನದೇ ಆಗಿರುವ ಮಹತ್ವವನ್ನು ಹೊಂದಿದೆ. ಈ ಮಹತ್ವವನ್ನು ಗಣನೆಗೆ ತೆಗೆದುಕೊಂಡಾಗ ಮತ್ತು ಕೇರಳದ ಎತ್ತರ ಪ್ರದೇಶಗಳಲ್ಲಿ ಟೀ ಪ್ಲಾಂಟೇಶನ್‌ನ ಸಂತತಿ ಮತ್ತು ಬೆಳವಣಿಗೆಯ ವಿಚಾರದಲ್ಲಿ ಅವಿಸ್ಮರಣೀಯ ಮತ್ತು ಆಸಕ್ತಿದಾಯಕವಾದ ವಿಚಾರಗಳನ್ನು ತೆರೆದಿಡುತ್ತದೆ, ಇದು ಒಂದು ಪ್ರಾಚ್ಯ ವಸ್ತು ಸಂಗ್ರಹಾಲಯವಾಗಿದ್ದು, ಇದನ್ನು ಕೇವಲ ಟೀ ಗಾಗಿಯೇ ಟಾಟಾ ಟೀಯವರು ಮುನ್ನರ್‌ನಲ್ಲಿ ಕೆಲವು ವರ್ಷಗಳ ಹಿಂದೆ ತೆರೆಯಲಾಗಿದೆ. ಈ ಪ್ರಾಚ್ಯ ವಸ್ತು ಸಂಗ್ರಹಾಲಯವು ಕಲಾತ್ಮಕ ವಸ್ತುಗಳ, ಫೋಟೊಗ್ರಾಫ್‌ಗಳ ಮತ್ತು ಯಂತ್ರಗಳ ಮನೆಯಾಗಿದೆ; ಇವೆಲ್ಲವೂ ಮುನ್ನಾರ್‌ನಲ್ಲಿ ಟೀ ಪ್ಲಾಂಟೇಶನ್‌ನ ಮೂಲ ಮತ್ತು ಅದರ ಬೆಳವಣಿಗೆಯ ಬಗ್ಗೆ ಸವಿಸ್ತಾರವಾದ ಕಥೆಯನ್ನೇ ಹೇಳುತ್ತವೆ. ಈ ಪ್ರಾಚ್ಯ ವಸ್ತು ಸಂಗ್ರಹಾಲಯವು ಮುನ್ನಾರ್‌ನಲ್ಲಿನ ಟಾಟಾ ಟೀಯ ನಲ್ಲಥನ್ನಿ ಎಸ್ಟೇಟ್‌ನಲ್ಲಿ ನೆಲೆಯಾಗಿದೆ.

ಮುನ್ನಾರ್

ಮುನ್ನಾರ್ ಇದು ದಕ್ಷಿಣ ಭಾರತದ ಜನಪ್ರಿಯ ಗಿರಿ ಧಾಮವಾಗಿದೆ, ಇಲ್ಲಿ ಭೇಟಿ ನೀಡಲು, ಓಡಾಡಲು ಮತ್ತು ಆನಂದಿಸಲು ಎಲ್ಲಾ ಕಡೆಯಲ್ಲಿ ಇರುವ ನಿಸರ್ಗದ ಸೌಂದರ್ಯ ಕಣ್ಣಿಗೆ ಹಬ್ಬವಾಗಿದ್ದು ಪ್ರೇಮಮಯ ವಾತಾವರಣ ಇರುವ ಪ್ರದೇಶದಂತಿದೆ. ಮುನ್ನಾರ್ ಮೂರು ಪರ್ವತಗಳ ತೊರೆಗಳ ಸಂಗಮವಿದೆ – ಮುತಿರಾಪುಝಾ, ನಲ್ಲತನ್ನಿ ಮತ್ತು ಕುಂಡಾಲ – ಮತ್ತು ’ಮುನ್ನಾರ್’ ಎಂದರೆ ಮಲಯಾಳಂ ಭಾಷೆಯಲ್ಲಿ ಮೂರು ನದಿಗಳು ಎಂದರ್ಥ. ಇದು ಸಮುದ್ರ ಮತ್ತದಿಂದ ಸುಮಾರು 1600 ಮೀಟರ್ ಮೇಲಿದೆ, ಈ ಗಿರಿ ಧಾಮವು ವಸಾಹತು ಶಾಹಿ ಅಧಿಕಾರದ ಯುಗದ ಸಮಯದಲ್ಲಿ ಬ್ರಿಟೀಶ್ ಸರ್ಕಾರದ ಬೇಸಿಗೆ ಕಾಲದ ರೆಸಾರ್ಟ್ ಆಗಿತ್ತು. ವಸಾಹತು ಶಾಹಿಯ ಅವಶೇಷಗಳು ಮುನ್ನಾರ್‌ನಲ್ಲಿ ಇರುವ ಇಂಗ್ಲಿಷ್ ಕಂಟ್ರಿ ಕಾಟೇಜ್‌ಗಳ ರೂಪದಲ್ಲಿ ಇಂದಿಗೂ ಉಳಿದಿವೆ, ಅವುಗಳಲ್ಲಿ ದಟ್ಟವಾದ ಅರಣ್ಯ, ಹುಲ್ಲುಗಾವಲು, ಇಳಿಜಾರಿನ ಪರ್ವತಗಳು, ರೋಮಾಂಚಕ ಕಣಿವೆ ಅತೀ ದೊಡ್ಡ ಧುಮ್ಮಿಕ್ಕುವ ಜಲಪಾತಗಳು, ಕಣ್ಸೆಳೆಯುವ ಟೀ ಪ್ಲಾಂಟೇಶನ್‌ಗಳು ಮತ್ತು ಗಾಳಿಬೀಸುವ ಕಾಲ್ದಾರಿಗಳು ಇರುವ ಇವುಗಳೆಲ್ಲವೂ ಮುನ್ನಾರ್‌ಗೆ ಬರುವ ಪ್ರವಾಸಿಗರಿಗೆ ಅತ್ಯುತ್ತಮ ರಜಾದಿನಗಳ ಅನುಭವವನ್ನು ಒದಗಿಸುತ್ತದೆ. ಮುನ್ನಾರ್ ನೀಲಕುರಿಂಜಿಗೆ ಕೂಡ ಜನಪ್ರಿಯವಾಗಿದೆ, ಇದು ಒಂದು ಅಪರೂಪದ ಸಸ್ಯವಾಗಿದ್ದು ಇದು ಹನ್ನೆರಡು ವರ್ಷಗಳಿಗೆ ಒಮ್ಮೆ ಹೂವುಗಳನ್ನು ನೀಡುತ್ತದೆ. ’ಕುರಿಂಜಿ ಋತು’ವಿನಲ್ಲಿ ಮುನ್ನಾರ್ ಅತ್ಯದ್ಭುತವಾಗಿ ಗೋಚರಿಸುತ್ತಿದ್ದು, ನೀಲಕುರಿಂಜಿ ಹೂವುಗಳ ನೀಲಿ ಬಣ್ಣದಲ್ಲಿ ಬೆಟ್ಟಗಳು ಮತ್ತು ಕಣಿವೆಗಳು ಮಿಂದಿರುವಂತೆ ಕಣ್ಣಿಗೆ ಹಬ್ಬವಾಗಿದೆ.

ಇಲ್ಲಿಗೆ ತಲುಪುವುದು

ಹತ್ತಿರದ ರೈಲ್ವೇ ನಿಲ್ದಾಣ: ಅಳುವಾ ಸುಮಾರು 108 ಕಿ.ಮೀ. ಮತ್ತು ಅಂಗಮಾಲಿ ಸುಮಾರು 109 ಕಿ.ಮೀ. ಹತ್ತಿರದ ಏರ್‌ಪೋರ್ಟ್: ಕೊಚ್ಚಿನ್ ಅಂತರಾಷ್ಟ್ರೀಯ ಏರ್‌ಪೋರ್ಟ್, ಅಳುವಾ – ಮುನ್ನಾರ್ ರಸ್ತೆ ಮೂಲಕ, ಸುಮಾರು 108 ಕಿ.ಮೀ.

ಸ್ಥಳ

ಅಕ್ಷಾಂಶ : 10.091234, ರೇಖಾಂಶ : 77.060051

ಭೌಗೋಳಿಕ ಮಾಹಿತಿ

ಮಳೆ ಪ್ರಮಾಣ: 275 ಸೆಂ. ಮೀ.

ಮ್ಯಾಪ್


District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close