ತೆಕ್ಕಾಡಿ ಎಂಬ ಪದವನ್ನು ಕೇಳಿದರೆ ಅದು ಮಂತ್ರಮುಗ್ಧವನ್ನಾಗಿಸುವ ಆನೆಗಳ, ಮುಕ್ತಾಯವಾಗದೇ ಇರುವ ಬೆಟ್ಟಗಳ ಸಾಲುಗಳ ಮತ್ತು ಮಸಾಲೆಗಳ ಸುವಾಸನೆಯುಕ್ತ ಪ್ಲಾಂಟೇಶನ್‌ಗಳ ಚಿತ್ರಗಳು ಕಾಣಿಸಿಕೊಳ್ಳುತ್ತವೆ. ತೆಕ್ಕಾಡಿಯ ಪೆರಿಯಾರ್ ಅರಣ್ಯಗಳು ಭಾರತದಲ್ಲಿನ ಪ್ರಮುಖ ವನ್ಯಜೀವಿ ಸಂರಕ್ಷಣಾ ಧಾಮಗಳಲ್ಲಿ ಒಂದಾಗಿದೆ. ಸಂಪೂರ್ಣ ಜಿಲ್ಲೆಯಲ್ಲಿ ಹರಡಿರುವ ಆಕರ್ಷಕ ಪ್ಲಾಂಟೇಶನ್‌ಗಳು ಮತ್ತು ಗಿರಿ ಧಾಮಗಳು ಟಕ್ಕಿಂಗ್ ಮಾಡುವವರಿಗೆ ಮತ್ತು ಕಾಲ್ನಡಿಗೆಯವರಿಗೆ ಸುಂದರ ನೋಟಗಳ ಪರಿಚಯ ಮಾಡಿಕೊಡುತ್ತದೆ.
ಪೆರಿಯಾರ್ ಅರಣ್ಯದ ಸಂಪತ್ತು
ಹೂವುಗಳು: ಇಲ್ಲಿ 171 ಹುಲ್ಲಿನ ತಳಿಗಳು ಮತ್ತು 143 ಆರ್ಕಿಡ್ ತಳಿಗಳನ್ನು ಒಳಗೊಂಡಂತೆ 1965 ಕ್ಕೂ ಹೆಚ್ಚಿನ ಹೂವಿನ ಗಿಡಗಳು ಇವೆ. ಇಲ್ಲಿ ದಕ್ಷಿಣ ಭಾರತದ ಏಕೈಕ ಶಂಕು ಮರ ಇದು ವಿಶೇಷವಾಗಿ ಪೊಡೋಕಾರ್ಪಸ್ ವ್ಯಾಲಿಚಿಯಾನಸ್ ಎಂದು ಪ್ರಖಾತವಾಗಿದ್ದು, ಪೆರಿಯಾರ್ ಹುಲಿ ಸಂರಕ್ಷಣಾ ಧಾಮದ ಅರಣ್ಯದಲ್ಲಿ ಬೆಳೆದಿದೆ.
ಪ್ರಾಣಿಸಂಕುಲ:
ಸಸ್ತನಿಗಳು: ಇಲ್ಲಿ 60 ಕ್ಕೂ ಹೆಚ್ಚು ತಳಿಗಳು ಕಂಡುಬರುತ್ತವೆ ಇದರಲ್ಲಿ, ಏಷ್ಯಾದ ಆನೆ, ಬಂಗಾಳದ ಹುಲಿ, ಭಾರತದ ಕಾಡುಕೋಣ, ಸಂಬಾರ್ ಜಿಂಕೆ, ಭಾರತದ ಬೇಟೆ ನಾಯಿ, ಚಿರತೆ, ಬೊಗಳುವ ಜಿಂಕೆ ಮತ್ತು ಮೃದುವಾದ ಮೇಲ್ಮೈಯುಳ್ಳ ನೀರುನಾಯಿ – ಇವುಗಳನ್ನು ಒಳಗೊಂಡಿದ್ದು, ಇವುಗಳನ್ನು ಪೆರಿಯಾರ್ ಸರೋವರದಲ್ಲಿ ದೋಣಿ ವಿಹಾರವನ್ನು ಮಾಡುವಾಗ ನೋಡಬಹುದಾಗಿದೆ. ಅತ್ಯಂತ ಹೆಚ್ಚು ಕಲ್ಲಿನ ಪದರಗಳಿರುವ ಕಡೆಗಳಲ್ಲಿ ನೀಲಗಿರಿ ಕಾಡುಜಿಂಕೆ ಕಂಡುಬರುತ್ತದೆ, ಅಂತೆಯೇ ಅಪರೂಪದ ಸಿಂಹದ ಬಾಲವುಳ್ಳ ಕೋತಿಗಳು ಹಚ್ಚ ಹಸಿರಿನ ಅರಣ್ಯಗಳ ಒಳಗೆ ಕಂಡುಬರುತ್ತವೆ. ಕುಲಾವಿ ಇರುವ ಮಂಗಗಳು ಮತ್ತು ನೀಲಗಿರಿ ಲಂಗೂರ್‌ಗಳು ದೋಣಿ ಇರುವ ಪ್ರದೇಶಗಳ ಸಮೀಪದಲ್ಲಿರುವ ಮರಗಳಲ್ಲಿ ಕಂಡುಬರುತ್ತದೆ.
ಪಕ್ಷಿಗಳು: ವಲಸೆಗಾರ ಹಕ್ಕಿಗಳನ್ನು ಒಳಗೊಂಡಂತೆ ನಾವು ಇಲ್ಲಿ 265 ತಳಿಯ ಪಕ್ಷಿಗಳನ್ನು ಹೊಂದಿದ್ದೇವೆ. ಮಲಬಾರ್‌ನ ಕಂದು ಕೊಂಬುಕೊಕ್ಕಿನ ಹಕ್ಕಿ, ಭಾರತೀಯ ಕೊಂಬುಕೊಕ್ಕಿನ ಹಕ್ಕಿ, ಬಿಳಿ ಬಣ್ಣದ ಉಬ್ಬಿದ ಟ್ರೀಪೀ, ಹಲವು ತಳಿಗಳ ಕಪ್ಪು ಬಣ್ಣದ ಡ್ರೊಂಗೋಗಳು, ಮರಕುಟಿಕಗಳು, ನೊಣ ಹಿಡುಕ ಹಕ್ಕಿಗಳು, ಹರಟೆ ಹಕ್ಕಿಗಳು, ಅತ್ಯದ್ಭುತವಾದ ಮಲಬಾರ್ ಟ್ರೋಗಾನ್ ಪಕ್ಷಿ, ಇತ್ಯಾದಿಗಳು ದೋಣಿ ಇರುವ ಪ್ರದೇಶಗಳ ಸಮೀಪದಲ್ಲಿ ಕಂಡುಬರುತ್ತವೆ.
ಸರೀಸೃಪಗಳು: ನಾಗರಹಾವು, ವಿಷ ಮಂಡಲ ಹಾವು, ಕಟ್ಟು ಹಾವು, ಸಾಕಷ್ಟು ಸಂಖ್ಯೆಯ ವಿಷ-ರಹಿತ ಹಾವುಗಳು, ಮತ್ತು ಭಾರತದ ಶಕ್ತಿಶಾಲಿಯಾಗಿರುವ ಹಲ್ಲಿ.
ಉಭಯವಾಸಿಗಳು: ವರ್ಣಮಯವಾದ ಮಲಬಾರ್ ಕುಪ್ಪಳಿಸುವ ಕಪ್ಪೆ, ಶಿಲೀಂದ್ರದಂತಹ ಕಪ್ಪೆ, ವಿವಿಧ ವರ್ಣದ ಕಪ್ಪೆ, ನೆಲಗಪ್ಪೆಯ ಹಲವು ತಳಿಗಳು ಮತ್ತು ಪಾದವಿಲ್ಲದ ಸಿಸಿಲಿಯನ್ ಹುಳುಗಳು.
ಮತ್ಸ್ಯ (ಮೀನು): ಪೆರಿಯಾರ್ ಸರೋವರ ಮತ್ತು ತೊರೆಗಳಲ್ಲಿ ಹಲವು ರೀತಿಯ ಮೀನುಗಲ ತಳಿಗಳಿದ್ದು ಅವುಗಳಲ್ಲಿ ಭಾರತದ ಆಟದ ಮೀನುಗಳಲ್ಲಿ ಜನಪ್ರಿಯವಾದ ಮತ್ತು ಅಪಾಯ ತರಬಲ್ಲ ಮಹಸೀರ್ ಎಂಬ ತಳಿಯೂ ಸೇರಿದೆ. ಮೃದುವಾದ ಮೇಲ್ಮೈಯುಳ್ಳ ನೀರು ನಾಯಿಯನ್ನು ದೋಣಿಯಿಂದ ಯಾವಾಗಲೂ ನೋಡಬಹುದಾಗಿದೆ.
ಪ್ಲಾಂಟೇಶನ್‌ಗಳು: ಟೀ, ಏಲಕ್ಕಿ, ಕಾಳು ಮೆಣಸು ಮತ್ತು ಕಾಫಿ ಪ್ಲಾಂಟೇಶನ್‌ಗಳು ಹುಲಿ ಸಂರಕ್ಷಣಾ ಧಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬರುತ್ತವೆ.
ವಾಚ್ ಟವರ್‌ಗಳು: ಪೆರಿಯಾರ್ ಹುಲಿ ಸಂರಕ್ಷಣಾ ಧಾಮದಲ್ಲಿ ಕೆಲವು ವಾಚ್ ಟವರ್‌ಗಳಿವೆ, ಇವು ವನ್ಯ ಜೀವಿಗಳನ್ನು ವೀಕ್ಷಿಸಲು ಅತ್ಯಂತ ಸೂಕ್ತವಾಗಿವೆ. ತೆಕ್ಕಾಡಿ ಅರಣ್ಯ ಮಾಹಿತಿ ಕೇಂದ್ರದಲ್ಲಿ ರಿಸರ್ವೇಶನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ದೂ. + 91- 4869 - 222027
ಪೆರಿಯಾರ್‌ನಲ್ಲಿನ ಪ್ರವಾಸೋದ್ಯಮ ಚಟುವಟಿಕೆಗಳ ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿರಿ:- ಪೆರಿಯಾರ್‌ನಲ್ಲಿನ ಹುಲಿ ಸಂರಕ್ಷಣಾ ಧಾಮ.
ಕ್ಷೇತ್ರ ನಿರ್ದೇಶಕರು (ಹುಲಿ ಯೋಜನೆ) ಕ್ಷೇತ್ರ ನಿರ್ದೇಶಕರ ಕಛೇರಿ ಎಸ್.ಎಚ್. ಮೌಂಟ್, ಕೊಟ್ಟಾಯಮ್ ಕೇರಳ, ಭಾರತ – 686 006 ದೂ: +91 481 2311740 ಇಮೇಲ್: fd@periyartigerreserve.org ಉಪ ನಿರ್ದೇಶಕರು (ಪೆರಿಯಾರ್ ಪೂರ್ವ) ಪೆರಿಯಾರ್ ಹುಲಿ ಸಂರಕ್ಷಣಾ ಧಮ ತೆಕ್ಕಾಡಿ ಕೇರಳ, ಭಾರತ – 68556 ದೂ: +91 4869 222027 ಇಮೇಲ್: dd@periyartigerreserve.org
ಇಲ್ಲಿ ತಲುಪುವುದುಹತ್ತಿರದ ರೈಲ್ವೇ ನಿಲ್ದಾಣ: ಕೊಟ್ಟಾಯಮ್ ರೈಲ್ವೇ ನಿಲ್ದಾಣ, ತೆಕ್ಕಾಡಿ ಯಿಂದ ಸುಮಾರು 110 ಕಿ.ಮೀ. ದೂರದಲ್ಲಿದೆ ಹತ್ತಿರದ ಏರ್‌ಪೋರ್ಟ್: ಮಧುರೈ, ಸುಮಾರು 140 ಕಿ.ಮೀ. ದೂರದಲ್ಲಿದೆ, ಕೊಚ್ಚಿನ್ ಅಂತರಾಷ್ಟ್ರೀಯ ಏರ್‌ಪೋರ್ಟ್, ಸುಮಾರು 190 ಕಿ.ಮೀ. ದೂರದಲ್ಲಿದೆ.
ಸ್ಥಳಅಕ್ಷಾಂಶ : 9.4679, ರೇಖಾಂಶ : 77.143328
ಭೌಗೋಳಿಕ ಮಾಹಿತಿಮಳೆ ಪ್ರಮಾಣ: 25 ಸೆಂ. ಮೀ.
ಮ್ಯಾಪ್ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.