ನೀವು ಯಾವಾಗಲಾದರೂ ಹೌಸ್‌ಬೋಟ್‌ನಲ್ಲಿ ಕೇರಳದ ಹಿನ್ನೀರಿನ ಮೂಲಕ ಕಡಲ ವಿಹಾರ ಯಾನವನ್ನು ಮಾಡಿರುವಿರಾ? ನೀವು ಮಾಡಿರುವುದು ಖಚಿತವಿಲ್ಲ ಎಂದು ನಿಮಗೆ ಅನ್ನಿಸುತ್ತಿದೆಯೇ. ಇದು ನಮ್ಮ ರಾಜ್ಯ ಒದಗಿಸುವ ಅತ್ಯಂತ ಉತ್ಕೃಷ್ಟ ಮತ್ತು ಅದ್ವಿತೀಯ ಅನುಭವಗಳನ್ನು ಸುಲಭವಾಗಿ ನೀವಿಲ್ಲಿ ಪಡೆದುಕೊಳ್ಳಬಹುದು.
ಇತ್ತೀಚಿನ ದಿನಗಳಲ್ಲಿ ಹೌಸ್‌ಬೋಟ್‌ಗಳು ಅತ್ಯಂತ ದೊಡ್ಡದಾಗಿರುತ್ತವೆ, ನಿಧಾನವಾಗಿ ಚಲಿಸುವ ಈ ಸುಸಜ್ಜಿತ ಯಾನಕ್ಕೆ ಉತ್ತಮವಾದ ದೋಣಿ ಯಾನವಿದೆ ಮತ್ತು ಇದು ಪ್ರಾಚೀನ ಕಾಲದ ಕೆಟ್ಟುವಲ್ಲಮ್‌ಗಳ ಪುನರುಜ್ಜೀವನಗೊಂಡ ಆವೃತ್ತಿಯಾಗಿದೆ. ಈ ಕೆಟ್ಟುವಲ್ಲಮ್ ಗಳನ್ನು ಅಕ್ಕಿ ಮತ್ತು ಮಸಾಲೆಗಳನ್ನು ಟನ್‌ಗಳಲ್ಲಿ ಒಯ್ಯಲು ಉಪಯೋಗಿಸಲಾಗುತ್ತದೆ. ಒಂದು ಉತ್ತಮ ಕೆಟ್ಟುವಲ್ಲಮ್ ಕುಟ್ಟನಾಡ್ ನಿಂದ ಕೊಚ್ಚಿ ಬಂದರಿನವರೆಗೆ 30 ಟನ್‌ಗಳಷ್ಟು ಸರಕುಗಳನ್ನು ಹಿಡಿಸುವಷ್ಟು ಸಮರ್ಥವಾಗಿರುತ್ತವೆ.
ಮಲಯಾಳಂ ಭಾಷೆಯಲ್ಲಿ ಕೆಟ್ಟು ಎಂದರೆ ’ವಿಶಾಲವಾದ ವಿನ್ಯಾಸ’ ’ವಲ್ಲಮ್’ ಎಂದರೆ ದೋಣಿ ಎಂದರ್ಥ. ಈ ದೋಣಿಗಳು ಮರದ ಒಡಲಿನ ಮೇಲೆ ಮೇಲ್ಚಾವಣಿಯ ಕವರ್ ಅನ್ನು ಲಗತ್ತಿಸಿಕೊಂಡಿರುತ್ತದೆ. ಈ ದೋಣಿಯನ್ನು ಹಲಸಿನ ಮರದ ಹಲಗೆಗಳನ್ನು ಒಂದಾಗಿ ಜೋಡಿಸಿ ಮಾಡಲಾಗಿರುತ್ತದೆ. ಇದನ್ನು ಸುಟ್ಟ ಗೋಡಂಬಿ ಬೀಜದಿಂದ ಮಾಡಲಾಗಿರುವ ಕಾಸ್ಟಿಕ್‌ನ ಕಪ್ಪು ರೆಸಿನ್ ಮೂಲಕ ಕೋಟ್ ಮಾಡಲಾಗುತ್ತದೆ. ಜಾಗರೂಕತೆಯಿಂದ ನಿರ್ವಹಿಸಿದರೆ, ಕೆಟ್ಟುವಲ್ಲಮ್ ತಲೆಮಾರುಗಳ ವರೆಗೆ ಉಳಿಯುತ್ತದೆ.
ಕೆಟ್ಟುವಲ್ಲಮ್‌ನ ಒಂದು ಭಾಗವು ಬಿದಿರು ಮತ್ತು ತೆಂಗಿನ ನಾರಿನಿಂದ ಕವರ್ ಮಾಡಲಾಗಿರುತ್ತದೆ, ಇದು ನಾವಿಕರ ತಂಡಕ್ಕೆ ವಿಶ್ರಾಂತಿ ಕೋಣೆ ಮತ್ತು ಅಡುಗೆ ಮನೆಯಾಗಿ ಸೇವೆ ಸಲ್ಲಿಸುತ್ತದೆ. ಅಲ್ಲಿಯೇ ಊಟವನ್ನು ತಯಾರು ಮಾಡಲಾಗುತ್ತದೆ ಮತ್ತು ಅದಕ್ಕೆ ಉಪ ಆಹಾರವಾಗಿ ತಾಜಾವಾಗಿ ಅಡುಗೆ ಮಾಡಿದ ಹಿನ್ನೀರಿನ ಮೀನನ್ನು ಒದಗಿಸಲಾಗುತ್ತದೆ.
ಈ ವ್ಯವಸ್ಥೆಯ ಸಾಗಾಣಿಕೆಯನ್ನು ಬದಲಿಸಿದ ಆಧುನಿಕ ಟ್ರಕ್‌ಗಳು ಜನರು ಹೊಸ ವಿಧಾನದಲ್ಲಿ ಮುಂದೆ ಬಂದು ಈ ದೋಣಿಗಳನ್ನು ಬದಲಾಯಿಸಿದ್ದಾರೆ, ಅವುಗಳಲ್ಲಿ ಹೆಚ್ಚಿನವು ಮಾರುಕಟ್ಟೆಯ ಬೆಲೆದ್100ಕ್ಕಿಂತ ಹೆಚ್ಚು ವರ್ಷ ಹಿಂದಿನದ್ದಾಗಿರುತ್ತದೆ. ಪ್ರವಾಸಿಗರು ವಾಸ್ತವ್ಯವನ್ನು ಹೂಡಲು ವಿಶೇಷವಾದ ಕೋಣೆಗಳನ್ನು ನಿರ್ಮಾಣ ಮಾಡಿದೆ, ಈ ದೋಣಿಗಳು ಪ್ರಸ್ತುತ ಜನಪ್ರಿಯತೆಯನ್ನು ಆನಂದಿಸಲು ಹತ್ತಿರದ ವಿಸ್ತರಣೆಯಿಂದ ಮುಂದಕ್ಕೆ ಚಲಿಸುತ್ತವೆ.
ಇಂದು ಇವುಗಳು ಹಿನ್ನೀರಿನ ಜನಪ್ರಿಯ ದೃಷ್ಯಗಳಾಗಿವೆ ಮತ್ತು ಅಲಾಪ್ಪುಝಾ ಒಂದರಲ್ಲಿಯೇ ಸುಮಾರು 500 ಹೌಸ್‌ಬೋಟ್‌ಗಳು ಇವೆ.
ಕೆಟ್ಟುವಲ್ಲಮ್‌ಗಳನ್ನು ಹೌಸ್‌ಬೋಟ್‌ಗಳನ್ನಾಗಿ ಪರಿವರ್ತಿಸುವಾಗ ಕೇವಲ ನೈಸರ್ಗಿಕ ಉತ್ಪನ್ನಗಳನ್ನು ಮಾತ್ರ ಬಳಕೆ ಮಾಡುವಂತಹ ಜಾಗರೂಕತೆಯನ್ನು ವಹಿಸಲಾಗುತ್ತದೆ. ಬಿದಿರಿನ ಚಾಪೆಗಳು, ಅಡಿಕೆ ಮರದ ಕಡ್ಡಿಗಳು ಮತ್ತು ಮರವನ್ನು ಮೇಲ್ಚಾವಣಿಗೆ ಬಳಸಲಾಗುತ್ತದೆ, ನೆಲಕ್ಕೆ ತೆಂಗಿನ ನಾರಿನ ಚಾಪೆಗಳನ್ನು ಮತ್ತು ಮರದ ಹಲಗೆಗಳನ್ನು ಉಪಯೋಗಿಸಲಾಗುತ್ತದೆ. ತೆಂಗಿನ ಮರಗಳ ಮರ ಮತ್ತು ತೆಂಗಿನ ನಾರನ್ನು ಹಾಸಿಗೆಗಳಿಗೆ ಉಪಯೋಗಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಲೈಟಿಂಗ್‌ಗಾಗಿ ಸೋಲಾರ್ ಪ್ಯಾನೆಲ್‌ಗಳಿಗೆ ಆದ್ಯತೆ ನೀಡಲಾಗುತ್ತಿದೆ.
ಇಂದು, ಹೌಸ್‌ಬೋಟ್‌ಗಳು ಒಂದು ಉತ್ತಮ ಹೋಟೆಲ್ ನಲ್ಲಿ ಇರುವ ಸುಸಜ್ಜಿತ ಬೆಡ್‌ರೂಮ್‌ಗಳು, ಆಧುನಿಕ ಶೌಚಾಲಯಗಳು, ಲಿವಿಂಗ್ ರೂಮ್‌ಗಳು, ಅಡುಗೆ ಮನೆ ಮತ್ತು ವೀಕ್ಷಣೆಯ ಆಯಾಮಕ್ಕೆ ಇರುವ ಬಾಲ್ಕನಿಯಂತಹ ಸೌಲಭ್ಯಗಳನ್ನು ಹೊಂದಿರುತ್ತವೆ. ಮರದ ಬಾಗಿರುವ ಮೇಲ್ಚಾವಣಿಯ ಭಾಗಗಳು ಅಥವಾ ಹರಡಲಾಗಿರುವ ಒಣಗಿದ ತಾಳೆ ಎಲೆಗಳು ನೆರಳನ್ನು ನೀಡುತ್ತವೆ ಮತ್ತು ಅನಿಯಮಿತ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತದೆ. ಹೆಚ್ಚಿನ ದೋಣಿಗಳು ಸ್ಥಳೀಯ ವ್ಯಕ್ತಿಗಳು ನಡೆಸುತ್ತಾರೆ, ಕೆಲವು ದೋಣಿಗಳು 40 ಎಚ್.ಪಿ. ಇಂಜಿನ್‌ನಿಂದ ಶಕ್ತಿಯುತವಾಗಿರುತ್ತವೆ. ಎರಡು ಅಥವಾ ಹೆಚ್ಚು ಹೌಸ್‌ಬೋಟ್‌ಗಳನ್ನು ಒಟ್ಟಿಗೆ ಜೋಡಿಸುವುದರಿಂದ ಬೋಟ್-ಟ್ರೈನ್ ಉಂಟಾಗುತ್ತವೆ ಇವುಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಇರುವ ಪ್ರಕೃತಿ ಪ್ರಿಯರು ಸಹ ಇವುಗಳನ್ನು ಉಪಯೋಗಿಸುತ್ತಾರೆ.
ಹೌಸ್‌ಬೋಟ್ ನಡೆಸುವುದರ ನಿಜವಾದ ರೋಮಾಂಚನ ಯಾವುದೆಂದರೆ ಸ್ಪರ್ಷಿಸಲಾಗದ ಅವಿಸ್ಮರಣೀಯ ನೋಟಗಳನ್ನು ವೀಕ್ಷಿಸಿ ಆನಂದಿಸುವುದಾಗಿದೆ ಮತ್ತು ಅದಿಲ್ಲದೇ ಇದ್ದರೆ ನೀವು ಇದರಲ್ಲಿ ಆರಾಮವಾಗಿ ತೇಲುತ್ತಿರುವಾಗ ಗ್ರಾಮೀಣ ಕೇರಳದ ಅದ್ವಿತೀಯ ನೋಟವನ್ನು ಈ ಮೂಲಕ ಆನಂದಿಸಬಹುದು.
ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.