ಮಲಬಾರ್ ಚಿಕನ್ ಬಿರಿಯಾನಿಯು ಒಂದು ಮಾಂಸಾಹಾರಿ ಅನ್ನದ ಆಹಾರ ಪದಾರ್ಥವಾಗಿದೆ, ಇದು ಆಹಾರದ ವಿಶ್ವದಲ್ಲಿ ಮಾನ್ಯತೆಯನ್ನು ಪಡೆದುಕೊಂಡಿದೆ. ಕೇರಳದ ಮಲಬಾರ್ ಪ್ರದೇಶದಿಂದ ಬಂದಿರುವ ಈ ಸವಿಯಾದ ಅಡುಗೆಯು ಅತ್ಯಂತ ಜನಪ್ರಿಯವಾಗಿದೆ, ಅದರಲ್ಲೂ ವಿಶೇಷವಾಗಿ ಬಿರಿಯಾನಿ ಪ್ರಿಯರಲ್ಲಿ ಜನಜನಿತವಾಗಿದೆ.
ಸಾಮಗ್ರಿಗಳು
ಬಾಸುಮತಿ ಅಕ್ಕಿ – 1 ಕೆ.ಜಿ.
ಚಿಕನ್ – 1
ಬಿರಿಯಾನಿ ಮಸಾಲೆ ಪೇಸ್ಟ್ (ಹಸಿ ಮೆಣಸು, ಚಕ್ಕೆ, ಲವಂಗಗಳು, ಬಡೇಸೋಂಪು, ಏಲಕ್ಕಿ, ಕಾಳು ಮೆಣಸು) – 4 ಟೇಬಲ್ ಚಮಚ
ಹಸಿ ಮೆಣಸು - 10
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಟೇಬಲ್ ಚಮಚ
ಕೊತ್ತಂಬರಿ ಸೊಪ್ಪು – 50 ಗ್ರಾಮ್
ಪುದಿನಾ ಸೊಪ್ಪು – 25 ಗ್ರಾಮ್
ಮೊಸರು – 150 ಮಿ.ಲೀ.
ಟೊಮ್ಯಾಟೊ – 150 ಗ್ರಾಮ್
ಈರುಳ್ಳಿ – 1 ಕೆ.ಜಿ.
ಕರಿ ಜೀರಿಗೆ ಬೀಜಗಳು – 1 ಟೇಬಲ್ ಚಮಚ
ಚಕ್ಕೆ ಕಡ್ಡಿ – 2 ತುಂಡುಗಳು
ದಾಲ್ಚಿನ್ನಿ ಎಲೆಗಳು – 2
ಗೋಡಂಬಿ ಮತ್ತು ದ್ರಾಕ್ಷಿ – 50 ಗ್ರಾಮ್
ಏಲಕ್ಕಿ – 5
ತುಪ್ಪ – 200 ಗ್ರಾಮ್
ಧನಿಯ ಪುಡಿ – 2 ಟೇಬಲ್ ಚಮಚ
ಹಾಲು – 500 ಮಿ.ಲೀ.
ಕೇಸರಿ – 1 ಚಿಟಿಕೆ
ನೀರು (ಅನ್ನಕ್ಕೆ) – 1 ಲೀಟರ್
ಮಾಡುವ ವಿಧಾನ
ಸಾಸ್ ಪ್ಯಾನ್‌ನಲ್ಲಿ ತುಪ್ಪವನ್ನು ಕಾಯಿಸಿಕೊಳ್ಳಿ; ಅದಕ್ಕೆ ಈರುಳ್ಳಿಯನ್ನು ಸೇರಿಸಿ ಮತ್ತು ಅದು ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಹೆಚ್ಚಿದ ಟೊಮ್ಯಾಟೋವನ್ನು ಸೇರಿಸಿ ಮತ್ತು ಚೆನ್ನಾಗಿ ಹುರಿಯಿರಿ. ಪ್ಯಾನ್‌ನಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೊಸರು ಮತ್ತು ಬಿರಿಯಾನಿ ಮಸಾಲ ಮತ್ತು ಅರಸಿನ ಪುಡಿ ಮತ್ತು ಧನಿಯಾ ಪುಡಿಯನ್ನು ಮಿಶ್ರಣ ಮಾಡಿ. ಚಿಕನ್ ತುಂಡುಗಳನ್ನು ಸೇರಿಸಿ ಮತ್ತು ಚೆನ್ನಾಗಿ ಬೇಯಿಸಿರಿ.
ಅಕ್ಕಿಯನ್ನು 10 ನಿಮಿಷಗಳ ವರೆಗೆ ನೆನೆಸಿಡಿ ಮತ್ತು ಚೆನ್ನಾಗಿ ಸೋಸಿರಿ. ಸಾಸ್ ಪ್ಯಾನ್‌ನಲ್ಲಿ ತುಪ್ಪವನ್ನು ಕಾಯಿಸಿರಿ ಮತ್ತು ಮಸಾಲೆಗಳನ್ನು, ಹೆಚ್ಚಿದ ಈರುಳ್ಳಿಯನ್ನು, ಪುದಿನಾ, ಕೊತ್ತಂಬರಿ ಸೊಪ್ಪುಗಳನ್ನು, ಗೋಡಂಬಿ, ದ್ರಾಕ್ಷಿ, ದಾಲ್ಚಿನ್ನಿ ಎಲೆಗಳನ್ನು ಸೇರಿಸಿ ಮತ್ತು ಕಂದು ಬಣ್ಣ ಬರುವವರೆಗೆ ಹುರಿಯಿರಿ. ಕುದಿ ಬರುವವರೆಗೆ ಕಾಯಿರಿ ಮತ್ತು ಆನಂತರ ಅಕ್ಕಿಯನ್ನು ಸೇರಿಸಿರಿ. ಉರಿಯನ್ನು ಕಡಿಮೆ ಇಡಿ, ಪ್ಯಾನ್ ಅನ್ನು ಲಿಡ್‌ನಿಂದ ಮುಚ್ಚಿರಿ ಮತ್ತು ಬೇಯಿಸುವುದನ್ನು 15 ನಿಮಿಷಗಳವರೆಗೆ ಮುಂದುವರೆಸಿ.
ಇನ್ನೊಂದು ಸಾಸ್ ಪ್ಯಾನ್ ತೆಗೆದುಕೊಳ್ಳಿ ಮತ್ತು ಅದರಲ್ಲಿ ಅರ್ಧ ಭಾಗ ಅನ್ನವನ್ನು ಹಾಕಿರಿ. ಈಗ ಬೇಯಿಸಿದ ಚಿಕನ್ ಅನ್ನು ಅನ್ನದ ಮೇಲೆ ಹಾಕಿರಿ. ಉಳಿದ ಅನ್ನವನ್ನು ಆ ಚಿಕನ್ ಮೇಲೆ ಸೇರಿಸಿರಿ. ಸಮಾನವಾದ ಪದರವನ್ನು ಮಾಡಲು ಪ್ಯಾನ್‌ನಲ್ಲಿ ಇರುವ ಮಿಶ್ರಣವನ್ನು ಸಮಾನವಾಗಿ ಹರಡಿ. ಅನ್ನದ ಒಳಗೆ ಚಮಚದಿಂದ ನಿಮ್ಮ ಮನಸ್ಸಿಗೆ ತೋಚಿದಂತೆ ತೂತು ಮಾಡಿರಿ ಮತ್ತು ಪ್ರತಿಯೊಂದರಲ್ಲಿಯೂ ಸ್ವಲ್ಪ ಸ್ವಲ್ಪ ಕೇಸರಿಯುಕ್ತ ಹಾಲನ್ನು ಹಾಕಿರಿ. ಅದರಲ್ಲಿ ಕೆಲವು ಚಮಚ ತುಪ್ಪ, ಹುರಿದ ಈರುಳ್ಳಿ, ಗೋಡಂಬಿ ಮತ್ತು ದ್ರಾಕ್ಷಿಯನ್ನು ಮೇಲ್ಮೈಯಲ್ಲಿ ಹಾಕಿರಿ ಮತ್ತು ಬಿಗಿಯಾಗಿ ಮುಚ್ಚಿರಿ. ಈಗ ರುಚಿಕರವಾದ ಮಲಬಾರ್ ಬಿರಿಯಾನಿಯು ಬಡಿಸಲು ಸಿದ್ಧವಾಗುತ್ತದೆ.
ಕೃಪೆ: ಯುವರಾಣಿ ರೆಸಿಡೆನ್ಸಿ, ಕೊಚ್ಚಿನ್.
ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.