ಕೇರಳ ಎಲ್ಲಾ ಚಟುವಟಿಕೆಯನ್ನು ನಿಲ್ಲಿಸಿ ಬಿಡುವ ಕುಂಭದ್ರೋಣ ಮಳೆಗಳು ಬರುವುದೇ ಇಲ್ಲ. ಮಳೆಯು ಬಿಸಿಲಿನ ವಿರಾಮಗಳೊಂದಿಗೆ ಕೆಲವು ಗಂಟೆಗಳ ವರೆಗೆ ಮಳೆ ಬರುತ್ತದೆ. ಆಗಾಗ್ಯೆ ಮಳೆಯು ಕೆಲವು ದಿನಗಳ ವರೆಗೆ ವಿಸ್ತರಿಸಿಕೊಳ್ಳಬಹುದು ಆದರೆ ಬಿಸಿಲು ಮಾತ್ರ ದೂರ ಇರುವುದಿಲ್ಲ. ಈ ಸ್ವರ್ಣಖಚಿತ ವಿರಾಮಗಳು ಜೀವನದ ನೈಸರ್ಗಿಕ ಹರಿವು ಸಮತೋಲನವನ್ನು ಉಂಟುಮಾಡುತ್ತದೆ.
ಕೇರಳವು ಪ್ರಮುಖವಾಗಿ ಎರಡು ಮಳೆಗಾಲಗಳನ್ನು ಹೊಂದಿದೆ. ಈಶಾನ್ಯ ಮುಂಗಾರು, ಎಡವಪಾಥಿ ಎನ್ನಲಾಗುವ ಇದು ಜೂನ್ ತಿಂಗಳಿನಲ್ಲಿ ಬರುತ್ತದೆ, ಇದು ಮಲೆಯಾಳಂ ಪಂಚಾಂಗದ ಎಡವಮ್ ತಿಂಗಳ ಮಧ್ಯ ಭಾಗದಲ್ಲಿ ಬರುತ್ತದೆ.
ಅಕ್ಟೋಬರ್ ಮಧ್ಯ ಭಾಗವು ನೈರುತ್ಯ ಮುಂಗಾರಿನ ಆಗಮನವನ್ನು ಸಾಕ್ಷೀಕರಿಸುತ್ತದೆ. ಮಲೆಯಾಳಂ ಪಂಚಾಂಗದಲ್ಲಿ ಈ ತಿಂಗಳನ್ನು ತುಲಮ್ ಎಂದು ಕರೆಯಲಾಗುತ್ತದೆ ಮತ್ತು ತುಲಾವರ್ಷಮ್ ಎಂಬ ಹೆಸರಿನ ಅರ್ಥ ಏನೆಂದರೆ “ತುಲಮ್‌ನಲ್ಲಿ ಮಳೆ” ಎಂದರ್ಥ. ಬಂಗಾಳ ಕೊಲ್ಲಿಯಿಂದ ಮಳೆಯ ಮೋಡಗಳು ಕಟ್ಟಿಕೊಳ್ಳುತ್ತವೆ ಮತ್ತು ಪಶ್ಚಿಮ ಘಟ್ಟಗಳಲ್ಲಿ ಇರುವ ಪಾಲಕ್ಕಾಡ್ ಮೂಲಕ ಕೇರಳವನ್ನು ಪ್ರವೇಶಿಸುತ್ತದೆ. ಇಲ್ಲಿ ಕಾರ್ಮೋಡಗಳು ಸುರಳಿ ಸುತ್ತುವ, ತಳ್ಳುವ, ಬೃಹತ್ ಗಾತ್ರದ ಅಲೆಗಳನ್ನು ಉಂಟುಮಾಡುವ ಈ ನೈರುತ್ಯ ಗಾಳಿಯ ನೋಟವನ್ನು ವೀಕ್ಷಿಸುವುದು ಅತ್ಯಂತ ರೋಮಾಂನಕಾರಿಯಾಗಿರುತ್ತದೆ.
ಕೇರಳದ ಕಲೆಯ ಪ್ರಕಾರಗಳು ಸೂಕ್ತವಾದ ಕಾರ್ಯತತ್ಪರತೆ ಮತ್ತು ತರ್ಬೇತಿಯನ್ನು ಅಪೇಕ್ಷಿಸುತ್ತವೆ. ಈ ಸ್ಥಳೀಯ ಕಲೆಯ ಪ್ರಕಾರಗಳಿಗೆ ದೇಹದ ಪ್ರತಿಯೊಂದು ನರವನ್ನು ಸಂಪೂರ್ಣವಾಗಿ ನಿಯಂತ್ರಣ ಹೊಂದುವ ಅಗತ್ಯ ಇರುತ್ತದೆ. ಈ ತರಬೇತಿಯ ಭಾಘವಾಗಿ ಕಲಾವಿದರು ಆಯುರ್ವೇದ ಥೆರಪಿಗಳನ್ನು ಪಡೆದುಕೊಳ್ಳುತ್ತಾರೆ. ಸ್ನಾಯುಗಳ ಫ್ಲೆಕ್ಸಿಬಿಲಿಟಿ ಮತ್ತು ಚಲನೆಯ ಚಾಕಚಕ್ಯತೆಯನ್ನು ಖಚಿತಪಡಿಸಿಕೊಳ್ಳಲು ಮುಂಗಾರಿನ ಅವಧಿಯಲ್ಲಿ ಕಲಾವಿದನ ದೇಹದ ಮೇಲೆ ವಿಶೇಷ ಗಿಡಮೂಲಿಕೆಗಳ ತೈಅ ಮತ್ತು ಔಷಧವನ್ನು ಲೇಪನ ಮಾಡುತ್ತಾರೆ.
ಮಳೆಯಿಂದ ಪ್ರಕೃತಿಯು ಹೇಗೆ ನವ ಚೈತನ್ಯವನ್ನು ಪಡೆದುಕೊಳ್ಳುವಂತೆ ಮಾನವನಿಗೂ ಪುನರುಜ್ಜೀವನದ ಅಗತ್ಯವಿರುತ್ತದೆ. ಆಯುರ್ವೇದದ ಪ್ರಕಾರ, ಪುನರುಜ್ಜೀವನ ಥೆರಪಿಗಳಿಗೆ ಮಳೆಗಾಲ ಅತ್ಯುತ್ತಮವಾದ ಋತುವಾಗಿದೆ, ಆಗ ವಾತಾವರಣವು ಧೂಳು ಮುಕ್ತವಾಗಿಯೂ ಮತ್ತು ತಂಪಾಗಿಯೂ ಇರುತ್ತದೆ, ದೇಹದ ಸೂಕ್ಷ್ಮ ರಂದ್ರಗಳು ಗರಿಷ್ಟ ಪ್ರಮಾಣದಲ್ಲಿ ತೆರೆದುಕೊಳ್ಳುತ್ತವೆ, ಇದು ಗಿಡಮೂಲಿಕೆಗಳ ತೈಲಗಳು ಮತ್ತು ಥೆರಪಿಗಳಿಗೆ ಗರಿಷ್ಟ ಪ್ರಮಾಣದ ಬೆಂಬಲವನ್ನು ನೀಡುತ್ತದೆ.
ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.