English
தமிழ்
हिन्दी
తెలుగు
ಕನ್ನಡ
ಶಬರಿಮಲೆಯಲ್ಲಿ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳನ್ನು ವಿವರಿಸುವ ಪಟ್ಟಿ ಇಲ್ಲಿದೆ
ದೇಗುಲವನ್ನು ತಲುಪಲು ಭಕ್ತಾದಿಗಳು ಸಾಂಪ್ರದಾಯಿಕ ಮಾರ್ಗವಾದ ಮರಕ್ಕೂಟಂ – ಶರಮ್‌ಕುತ್ತಿ - ನಡಪಂತಲ್ ಅನ್ನು ಅನುಸರಿಸಿ ಎಂದು ಸಲಹೆ ನೀಡಲಾಗಿದೆ.
18 ಪವಿತ್ರ ಮೆಟ್ಟಿಲುಗಳನ್ನು ತಲುಪಲು ಸರದಿಯನ್ನು ಕಟ್ಟುನಿಟ್ಟಾಗಿ ಅನುಸರಿಸಿ
ಹಿಂದಿರುಗುವಾಗ ನಡಪಂತಲ್ ಮೇಲ್ಸೇತುವೆ(ಫ್ಲೈಓವರ್)ಯನ್ನು ಮಾತ್ರ ಬಳಸಿ
ಅಗತ್ಯವಿದ್ದಾಗ ಭದ್ರತಾ ತಪಾಸಣೆಗೆ ಸಹಕರಿಸಿ
ಡೋಲಿ ಅಗತ್ಯವಿದ್ದರೆ, ದೇವಸ್ವಂ ಕೌಂಟರ್‌ನಲ್ಲಿ ಮಾತ್ರ ಪಾವತಿ ಮಾಡಿ
ಗೊತ್ತುಪಡಿಸಿದ ಪಾರ್ಕಿಂಗ್ ಪ್ರದೇಶಗಳಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸಿ
ಕರ್ತವ್ಯದಲ್ಲಿರುವ ಪೊಲೀಸರು ಮತ್ತು ದೇವಸ್ವಂ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಿ
ಒಂದೇ ಬಾರಿಗೆ ಏರಬೇಡಿ. ಅಗತ್ಯವಿರುವಾಗ ವಿಶ್ರಾಂತಿ ತೆಗೆದುಕೊಂಡ ನಂತರ ಮುಂದುವರಿಯಿರಿ
ದೇವಸ್ಥಾನದ ಆವರಣದಲ್ಲಿ ಮೊಬೈಲ್ ಬಳಸಬೇಡಿ
ಧೂಮಪಾನ, ಮದ್ಯಪಾನ ಮತ್ತು ಇತರ ಅಕ್ರಮ ಪದಾರ್ಥಗಳ ಸೇವನೆಯನ್ನು ಅನುಮತಿಸಲಾಗುವುದಿಲ್ಲ
ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕ ವಸ್ತುಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ
ಶೌಚಾಲಯಗಳು ಮತ್ತು ಲ್ಯಾಟ್ರಿನ್‌ಗಳ ಹೊರಗೆ ಮಲ ಮೂತ್ರ ವಿಸರ್ಜಿಸಬೇಡಿ
18 ಪವಿತ್ರ ಮೆಟ್ಟಿಲುಗಳಲ್ಲಿ ತೆಂಗಿನಕಾಯಿ ಒಡೆಯುವುದನ್ನು ನಿಷೇಧಿಸಲಾಗಿದೆ
ಗೊತ್ತುಪಡಿಸಿದ ಕಸದ ತೊಟ್ಟಿಗಳನ್ನು ಹೊರತುಪಡಿಸಿ ಬೇರೆಡೆ ತ್ಯಾಜ್ಯವನ್ನು ಎಸೆಯಬೇಡಿ
ಮೇಲಿನ ತಿರುಮುಟ್ಟಂ ಅಥವಾ ತಂತ್ರಿನಡದಲ್ಲಿ ವಿಶ್ರಾಂತಿ ಪಡೆಯುವುದನ್ನು ನಿಷೇಧಿಸಲಾಗಿದೆ
ಹತ್ತುವಾಗ ಪವಿತ್ರ ಮೆಟ್ಟಿಲುಗಳ ಮೇಲೆ ಮಂಡಿಯೂರಿ ಕುಳಿತುಕೊಳ್ಳಬೇಡಿ
ಅಗತ್ಯವಿದ್ದಲ್ಲಿ ಯಾವಾಗ ಬೇಕಾದರೂ ಪೊಲೀಸ್ ಸಿಬ್ಬಂದಿಯ ಸಹಾಯವನ್ನು ಪಡೆದುಕೊಳ್ಳಿ
ಅನುಮಾನಾಸ್ಪದ ವ್ಯಕ್ತಿಗಳು ಮತ್ತು ವಸ್ತುಗಳು ಕಂಡುಬಂದರೆ ಹತ್ತಿರದ ಪೊಲೀಸ್ ಪೋಸ್ಟ್‌ಗೆ ಮಾಹಿತಿ ನೀಡಿ
ಸರಿಯಾದ ಪರವಾನಗಿ ಇಲ್ಲದ ಮಳಿಗೆಗಳಿಂದ ಖಾದ್ಯ ವಸ್ತುಗಳನ್ನು ಖರೀದಿಸಬೇಡಿ
ಜನದಟ್ಟಣೆ ಇದ್ದರೆ ದೇಗುಲಕ್ಕೆ ಹೋಗಬೇಡಿ
ತುರ್ತು ಸಂದರ್ಭದಲ್ಲಿ ಗೊತ್ತುಪಡಿಸಿದ ವೈದ್ಯಕೀಯ ಕೇಂದ್ರಗಳು ಮತ್ತು ಆಕ್ಸಿಜನ್ ಪಾರ್ಲರ್‌ಗಳಲ್ಲಿ ನೀವು ವೈದ್ಯಕೀಯ ಸೌಲಭ್ಯವನ್ನು ಪಡೆಯಬಹುದು
ಮಕ್ಕಳು ಮತ್ತು ಹಿರಿಯರು ತಮ್ಮ ಕುತ್ತಿಗೆಗೆ ಗುರುತಿನ ಚೀಟಿಯನ್ನು ನೇತುಹಾಕಿಕೊಳ್ಳುವಂತೆ ಸಲಹೆ ನೀಡಲಾಗಿದೆ